Chief Editor
Manohar. R (Manu)
Photo Journalist
chitrataramanu@gmail.com
+91 9845549026
ಧರ್ಮಕೀರ್ತಿರಾಜ್ ಅಭಿನಯದ,ಆರೋನ್ ಕಾರ್ತಿಕ್ ನಿರ್ದೇಶನದ``ಮಾನ್ಸ್ಟ್ಟರ್`` ಚಿತ್ರೀಕರಣ ಪೂರ್ಣ
Posted date: 22 Mon, Apr 2024 � 10:57:02 AM
ಧರ್ಮಕೀರ್ತಿರಾಜ್ ನಾಯಕನಾಗಿ ನಟಿಸುತ್ತಿರುವ ಮಾನ್ಸ್ಟರ್ ಚಿತ್ರಕ್ಕೆ ಆರೋನ್ ಕಾರ್ತಿಕ್ ಕಥೆ,ಚಿತ್ರಕಥೆ, ಸಂಗೀತ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಸ್‌ಪಿಎಸ್ ರೆಡ್ಡಿ ಪ್ರೊಡಕ್ಷನ್ ಅಡಿಯಲ್ಲಿ ಪುಟ್ಟರಾಜು ರೆಡ್ಡಿ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ. ಡ್ರಗ್ಸ್ ವಿರುದ್ದ ಹೋರಾಟವೆಂದು ಇಂಗ್ಲೀಷ್‌ದಲ್ಲಿ ಅಡಿಬರಹವಿದೆ. ಈಗಾಗಲೇ ಪೋಸ್ಟರ್ ಬಿಡುಗಡೆಯಾಗಿದ್ದು  ಜನರ ಮನ ತಲುಪಿದೆ . ಆನೆಯೊಂದು ಸೊಂಡಿಲದಲ್ಲಿ ಪುಟ್ಟ ಕಂದಮ್ಮನನ್ನು ರಕ್ಷಣೆ ಮಾಡುತ್ತಿರುವ ಸ್ಟಿಲ್ ವಿನೂತನ ಸಿನಿಮಾ ಎಂಬುದು ಖಾತರಿಯಾಗಿದೆ .
 
ಆರೋನ್ ಕಾರ್ತಿಕ್ ನಿರ್ದೇಶನ  ಮಾನ್ಸ್ಟರ್  ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು , ಈಗ ಡಬ್ಬಿಂಗ್  ಕೆಲಸದಲ್ಲಿ ತೊಡಗಿಕೊಂಡಿದೆ. 

ಛಾಯಾಗ್ರಹಣ ಸೂರ್ಯೊದಯ, ಸಂಕಲನ ಆಯುರ್‌ಸ್ವಾಮಿ, ಸಂಭಾಷಣೆ ವಿನಯ್‌ಮೂರ್ತಿ-ಆರೋನ್ ಕಾರ್ತಿಕ್, ಸಾಹಸ ಡಿಫರೆಂಟ್‌ಡ್ಯಾನಿ-ಥ್ರಿಲ್ಲರ್ ಮಂಜು,  ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದ್ದು. ಉಳಿದಂತೆ ನಾಯಕಿ ತಾರಾಗಣ ವಿವರವನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಂಡವು ಹೇಳಿಕೊಂಡಿದೆ. 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಧರ್ಮಕೀರ್ತಿರಾಜ್ ಅಭಿನಯದ,ಆರೋನ್ ಕಾರ್ತಿಕ್ ನಿರ್ದೇಶನದ``ಮಾನ್ಸ್ಟ್ಟರ್`` ಚಿತ್ರೀಕರಣ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.